Special Parayana during Adhika Shraavana Maasa
July 11, 2023
Sri Shaankara Tattva Prasaara Abhiyanam
With the benign blessings of Dakshinamaya Sringeri Sri Sharada Peethadhipati Jagadguru Shankaracharya Sri Sri Sri Bharati Tirtha Mahasannidhanam and Jagadguru Sri Sri Sri Vidhushekhara Bharati Sannidhanam, Sri Shaankara Tattva Prasara Abhiyanam of Sringeri Math is organising a Parayana Anushthanam for the Adhika Shraavana Masa (July 18 to August 16). The Parayana primarily comprises Balaramayanam (the first Sarga, containing 100 verses, of the Bala Kanda of Srimad Valmiki Ramayanam).
The links to the PDF of the Parayana text along with the audio of the learning version of Balaramayanam (rendered by a young traditional scholar) are given below.
The Parayanam will be inaugurated in the divine presence of Jagadguru Sri Sri Sannidhanam on July 18 at 10AM in Narasimha Vanam, Sringeri.
All Astikas are requested to participate in the month-long parayana and be the recipient of the grace of Bhagavan.
PDF Files For Parayana
Audio
ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನ – ಅಧಿಕ ಶ್ರಾವಣಮಾಸ ನಿಮಿತ್ತ ವಿಶೇಷ ಆಚರಣೆ
(ಜುಲೈ 18, 2023 ಮಂಗಳವಾರ – ಆಗಸ್ಟ್ 16, 2023 ಬುಧವಾರ)
ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಅವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪರಿಪೂರ್ಣ ಅನುಗ್ರಹದೊಂದಿಗೆ ಅಧಿಕಮಾಸ ನಿಮಿತ್ತ ಬಾಲರಾಮಾಯಣದ ಪಾರಾಯಣ ಸೇರಿದಂತೆ ವಿಶೇಷ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಶೋಭಕೃತ್ ಸಂವತ್ಸರದಲ್ಲಿ ಶ್ರಾವಣ ಮಾಸವು ಅಧಿಕವಾಗಿ ಬಂದಿದ್ದರಿಂದ ನಿಖಿಲಾಸ್ತಿಕ ಮಹಾಶಯರು ಕೆಳಗೆ ನೀಡಿರುವ ಸುಮಾರು 60 ನಿಮಿಷ ಅವಧಿಯ ಅನುಷ್ಠಾನಕ್ರಮವನ್ನು ಈ ಮಾಸ ಪೂರ್ತಿ ಅನುಸರಿಸಿ, ಭಗವದಾರಾಧನೆಯಲ್ಲಿ ತೊಡಗಿ ಭಗವಂತನ ಹಾಗೂ ಉಭಯ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
ಶೃಂಗೇರಿಯಲ್ಲಿ ಈ ಕಾರ್ಯಕ್ರಮವು ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಅಧಿಕ ಶ್ರಾವಣ ಶುಕ್ಲ ಪ್ರತಿಪತ್ 18.7.2023 ರಂದು ಬೆಳಿಗ್ಗೆ 10 ಘಂಟೆಗೆ ನರಸಿಂಹವನದ ಗುರುನಿವಾಸದಲ್ಲಿ ಪ್ರಾರಂಭಗೊಳ್ಳಲಿದೆ.
ಈ ಪಾರಾಯಣದ ಪಠ್ಯ ಕ್ರಮವು ಪ್ರಧಾನವಾಗಿ ಶ್ರೀ ವಾಲ್ಮೀಕಿ ಮಹರ್ಷಿಗಳು ರಚಿಸಿದ 100 ಶ್ಲೋಕಗಳಿರುವ ಬಾಲರಾಮಾಯಣ (ಬಾಲಕಾಂಡ ಪ್ರಥಮ ಸರ್ಗ) ವನ್ನು ಒಳಗೊಂಡಿದೆ.
ಆಸ್ತಿಕ ಮಹಾಜನರೆಲ್ಲರು ಈ ಪಾರಾಯಣ ಅನುಷ್ಠಾನದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇನೆ.