Sri Sri Jagadguru Shankaracharya Mahasamsthanam, Dakshinamanaya Sri Sharada Peetham, Sringeri



Dakshinamnaya Sri Sharada Peetham, Sringeri

ಕಲ್ಯಾಣವೃಷ್ಟಿ ಮಹಾಭಿಯಾನ



 

With the blessings and directions of both the Jagadgurus, Sri Shaankara Tattvaprasara Abhiyana of Sri Sharada Peetha and Vedanta Bharati institutions have undertaken the Mahabhiyana of offering and mass chanting of the Kalyanavrushtistava, Shivapanchaksharanakshatramala Stotra and Lakshminarasimhakaravalamba Stotra. These Stotras composed by Sri Shankara Bhagavatpada are effective to derive Punya and special benefits to everyone.

ಪರಶಿವಾವತಾರರಾದ ಜಗದ್ಗುರು ಶ್ರೀಶಂಕರಭಗವತ್ಪಾದಾಚಾರ್ಯರು ಹನ್ನೆರಡು ಶತಮಾನಗಳ ಹಿಂದೆ ನಮ್ಮ ಪವಿತ್ರ ಭಾರತದೇಶದಲ್ಲಿ ಅವತರಿಸಿ ಸನಾತನ ವೈದಿಕ ಧರ್ಮ ಮತ್ತು ಉಪನಿಷತ್ಪ್ರತಿಪಾದ್ಯವಾದ ಅದ್ವೈತಸಿದ್ಧಾಂತವನ್ನು ಉದ್ಧಾರ ಮಾಡಿ ಅವುಗಳ ನಿರಂತರ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದರೆಂಬ ವಿಷಯವು ಜಗದ್ವಿದಿತವೇ ಆಗಿದೆ. ಈ ಚತುರಾಮ್ನಾಯ ಪೀಠಗಳಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠವು ಇಂದಿಗೂ ಅವಿಚ್ಛಿನ್ನ ಗುರುಪರಂಪರೆಯೊಂದಿಗೆ ಕಂಗೊಳಿಸುತ್ತಿದೆ. ಪ್ರಸ್ತುತ ಈ ಪೀಠದ ಮೂವತ್ತಾರನೆಯ ಅಧಿಪತಿಗಳು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಸಂನ್ಯಾಸ ಸ್ವೀಕಾರ ಮಾಡಿ ಐವತ್ತು ವರ್ಷಗಳನ್ನು ಪೂರೈಸುತ್ತಿದ್ದಾರೆ.

ಪ್ರಸ್ತುತ ಅವರ ಸಂನ್ಯಾಸ ಸ್ವೀಕಾರದ ಐವತ್ತನೆಯ ವರ್ಷದ ಸ್ವರ್ಣಮಹೋತ್ಸವವನ್ನು “ಸುವರ್ಣಭಾರತೀ” ಎಂಬ ಹೆಸರಿನಲ್ಲಿ ವರ್ಷಪೂರ್ತಿ ಆಚರಿಸಬೇಕೆಂದು ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಸಂಕಲ್ಪಿಸಿದ್ದಾರೆ. ತದನುಸಾರ ಲೋಕಕ್ಷೇಮಾರ್ಥವಾಗಿ ಪಂಚಾಯತನ ದೇವತಾರಾಧನೆ ಮೊದಲಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿದ್ದು, ಅವುಗಳಲ್ಲಿ ಶಾಂಕರ ಸ್ತೋತ್ರ ಸಮರ್ಪಣೆಯೂ ಒಂದಾಗಿದೆ.

ಉಭಯ ಜಗದ್ಗುರುಗಳವರ ಅಪ್ಪಣೆ ಹಾಗೂ ಅನುಗ್ರಹದೊಂದಿಗೆ ಶ್ರೀಮಠದ ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನ ಮತ್ತು ವೇದಾಂತಭಾರತೀ ಸಂಸ್ಥೆಗಳು ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರನಕ್ಷತ್ರಮಾಲಾಸ್ತೋತ್ರ ಮತ್ತು ಲಕ್ಷ್ಮೀನೃಸಿಂಹಕರಾವಲಂಬಸ್ತೋತ್ರ ಈ ಮೂರು ಸ್ತೋತ್ರಗಳ ವಿಶೇಷ ಮಹಾಭಿಯಾನವನ್ನು ಕೈಗೊಂಡಿವೆ. ಶ್ರೀಶಂಕರಭಗವತ್ಪಾದರಿಂದ ರಚಿತವಾದ ಈ ಮೂರು ಸ್ತೋತ್ರಗಳು ಪ್ರತಿಯೊಬ್ಬರಿಗೂ ಅತ್ಯಂತ ಪುಣ್ಯವನ್ನುಂಟುಮಾಡಿ, ವಿಶೇಷ ಫಲಗಳನ್ನು ನೀಡುವ ಸಾಮರ್ಥ್ಯವುಳ್ಳದ್ದಾಗಿವೆ.

ಕಲ್ಯಾಣವೃಷ್ಟಿಸ್ತವದಲ್ಲಿ ಶ್ರೀವಿದ್ಯಾ ಪಂಚದಶಾಕ್ಷರೀ ಮಹಾಮಂತ್ರದ ಅಕ್ಷರಗಳಿಂದ ಪ್ರತಿ ಶ್ಲೋಕವೂ ಪ್ರಾರಂಭವಾಗುತ್ತದೆ. ಜಗನ್ಮಾತೆಯನ್ನು ಸ್ತುತಿಸುವ ಈ ಸ್ತೋತ್ರವು ಕಲ್ಯಾಣವೃಷ್ಟಿಯನ್ನು ಸುರಿಸಬಲ್ಲದು. ಲಕ್ಷ್ಮೀನೃಸಿಂಹಸ್ವಾಮಿಯನ್ನು ಸ್ತುತಿಸುವ ಕರಾವಲಂಬಸ್ತೋತ್ರವು ಸಂಸಾರದುಃಖವನ್ನು ದಾಟಿಸುತ್ತದೆ. ಪ್ರತಿ ಶ್ಲೋಕದ ನಾಲ್ಕು ಪಂಕ್ತಿಗಳಲ್ಲಿ ಶಿವಪಂಚಾಕ್ಷರೀ ಮಂತ್ರವನ್ನು ಹೊಂದಿರುವ ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರದಲ್ಲಿ 108 ಬಾರಿ ಶಿವಪಂಚಾಕ್ಷರೀ ಮಂತ್ರವನ್ನು ಉಲ್ಲೇಖಿಸಿ, ಸರಳವಾಗಿ ಶಿವತತ್ತ್ವವನ್ನು ಆಚಾರ್ಯರು ಉಪದೇಶಿಸಿದ್ದಾರೆ. ಈ ಮಂತ್ರದ ಉಚ್ಚಾರಣೆಯಿಂದ ಸಾಧಕನ ಮನೋಭೀಷ್ಟಗಳು ನೆರವೇರುವುದರಲ್ಲಿ ಸಂದೇಹವಿಲ್ಲ.

ಜಗದ್ಗುರು ಮಹಾಸ್ವಾಮಿಗಳವರ ಅಪ್ಪಣೆಯಂತೆ ಮಹಾಶಿವರಾತ್ರಿಯ (ಮಾರ್ಚ್ 8, 2024 ಶುಕ್ರವಾರ) ಪರ್ವದಿನದಂದು ಈ ಮೂರೂ ಸ್ತೋತ್ರಗಳ ಅಭ್ಯಾಸವರ್ಗಗಳನ್ನು ಆಸ್ತಿಕರು ತಮ್ಮ ಮನೆ, ಕೇಂದ್ರ, ಸಂಘ-ಸಂಸ್ಥೆ ಇತ್ಯಾದಿಗಳಲ್ಲಿ ಪ್ರಾರಂಭಿಸುವುದು. (ಅದಕ್ಕಾಗಿ ಸ್ತೋತ್ರಗಳನ್ನು ಮತ್ತು ಅದರ ಆಡಿಯೋ ಲಿಂಕ್ ಅನ್ನು ಸಹ ಕೊಡಲಾಗಿದೆ.) ಅಭಿಯಾನದ ಮುಂದಿನ ಬೆಳವಣಿಗೆಗಳನ್ನು ಪುನಃ ತಿಳಿಸಲಾಗುವುದು. ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನದ ಕಾರ್ಯಕರ್ತರುಗಳು ಮತ್ತು ವೇದಾಂತಭಾರತೀಯ ಕಾರ್ಯಕರ್ತರುಗಳು ತಮ್ಮ ತಮ್ಮ ಕೇಂದ್ರಗಳಲ್ಲಿ ಈ ಶ್ಲೋಕಗಳನ್ನು ಕಲಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಅಪೇಕ್ಷಿಸುತ್ತೇವೆ.

ಅತ್ಯಂತ ಪವಿತ್ರವಾದ ಈ ಮಹಾಭಿಯಾನದಲ್ಲಿ ಆಸ್ತಿಕಮಹಾಜನರೆಲ್ಲರೂ ಭಾಗವಹಿಸಿ, ಶ್ರೀ ಆದಿ ಶಂಕರಾಚಾರ್ಯರ ಹಾಗೂ ಉಭಯ ಜಗದ್ಗುರು ಮಹಾಸ್ವಾಮಿಗಳವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರುತ್ತಿದ್ದೇವೆ.

ಪಿಡಿಎಫ್ ಡಾಕ್ಯುಮೆಂಟ್

ಪ್ರತ್ಯೇಕ ಫೈಲ್‌ಗಳು

ಆಡಿಯೋ ಫೈಲ್‌ಗಳು

 
  • For the protection of the righteous ones (committed to dharma), for the destruction of the unrighteous ones (follow adharma), and for the establishment of dharma I take birth in every age. Bhagavan Sri Krishna on Significance of God
  • O devotee, (with the mind) fixed upon the lotus feet of the Guru! May you soon be free from Samsara. Through the control of the senses and the mind, you shall behold the Lord indwelling in your heart! Jagadguru Sri Adi Shankara Bhagavatpada on Mohamudgara
  • Have firm faith in God, his words and his servants. Have staunch belief in your religion and in dharma. Jagadguru Sri Chandrashekhara Bharati Mahaswamigal on Significance of God
  • An ideal disciple will indeed act as per the Guru’s instructions and not give place to thoughts as “Is it possible for me to do as he says? Shall I try something else?” If we follow our Guru’s instructions, it does not mean that we are unintelligent. It only implies that we have surrendered for our own good to a power superior to us. Jagadguru Sri Abhinava Vidyatirtha Mahaswamigal on Significance of God
  • If we poke our nose into matters that do not concern us, it is we who lose our precious time. Jagadguru Sri Bharati Tirtha Mahaswamigal on Significance of God's Names