Stotra Triveni Mahasamarpana
With the blessings and directions of both the Jagadgurus, Sri Shaankara Tattvaprasara Abhiyana of Sri Sharada Peetha and Vedanta Bharati institutions have undertaken the Mahabhiyana of offering and mass chanting of the Kalyanavrushtistava, Shivapanchaksharanakshatramala Stotra and Lakshminarasimhakaravalamba Stotra. These Stotras composed by Sri Shankara Bhagavatpada are effective to derive Punya and special benefits to everyone.
ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ
- ವಿವರಣೆ
- ಅಧಿಕೃತ ಪ್ರಕಟಣೆ
- ಸಂಪನ್ಮೂಲ ಸಾಮಗ್ರಿಗಳು
Text (In multiple Indian scripts)
Text (PDF)
Audio (MP3)
ಪರಶಿವಾವತಾರರಾದ ಜಗದ್ಗುರು ಶ್ರೀಶಂಕರಭಗವತ್ಪಾದಾಚಾರ್ಯರು ಹನ್ನೆರಡು ಶತಮಾನಗಳ ಹಿಂದೆ ನಮ್ಮ ಪವಿತ್ರ ಭಾರತದೇಶದಲ್ಲಿ ಅವತರಿಸಿ ಸನಾತನ ವೈದಿಕ ಧರ್ಮ ಮತ್ತು ಉಪನಿಷತ್ಪ್ರತಿಪಾದ್ಯವಾದ ಅದ್ವೈತಸಿದ್ಧಾಂತವನ್ನು ಉದ್ಧಾರ ಮಾಡಿ ಅವುಗಳ ನಿರಂತರ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದರೆಂಬ ವಿಷಯವು ಜಗದ್ವಿದಿತವೇ ಆಗಿದೆ. ಈ ಚತುರಾಮ್ನಾಯ ಪೀಠಗಳಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠವು ಪ್ರಥಮವೂ, ಪ್ರಧಾನವೂ ಆಗಿದ್ದು, ಇಂದಿಗೂ ಅವಿಚ್ಛಿನ್ನ ಗುರುಪರಂಪರೆಯೊಂದಿಗೆ ಕಂಗೊಳಿಸುತ್ತಿದೆ. ಪ್ರಸ್ತುತ ಈ ಪೀಠದ ಮೂವತ್ತಾರನೆಯ ಅಧಿಪತಿಗಳು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಸಂನ್ಯಾಸ ಸ್ವೀಕಾರ ಮಾಡಿ ಐವತ್ತು ವರ್ಷಗಳು ಸಮಾಪ್ತವಾಗಿವೆ.
ಅವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅಪ್ಪಣೆಯಂತೆ “ಸುವರ್ಣಭಾರತೀ” ಎಂಬ ಹೆಸರಿನಲ್ಲಿ ಈ ಶುಭಸಂದರ್ಭವನ್ನು ಲೋಕಕ್ಷೇಮಾರ್ಥವಾಗಿ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳು ಮತ್ತು ವಿಶೇಷವಾದ ಶಾಂಕರ ಸ್ತೋತ್ರ ಪಠಣಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಅತ್ಯಂತ ವೈಭವೋಪೇತವಾಗಿ ಮಾಡುವುದರ ಮೂಲಕ ವರ್ಷಪೂರ್ತಿ ಆಚರಿಸಲಾಗುತ್ತಿದೆ.
ಪ್ರಸ್ತುತ ಉಭಯ ಜಗದ್ಗುರುಗಳವರ ಅಪ್ಪಣೆಯಂತೆ ಶ್ರೀಮಠದ ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನ ಮತ್ತು ವೇದಾಂತಭಾರತೀ ಸಂಸ್ಥೆಗಳು ಶ್ರೀಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳ ವಿಶೇಷ ಅಭಿಯಾನವನ್ನು ಕೈಗೊಂಡಿದ್ದು, ಇದರ ಮಹಾಸಮರ್ಪಣೆಯನ್ನು 11.1.2025 ಶನಿವಾರದಂದು ಶೃಂಗೇರಿ ಕ್ಷೇತ್ರದಲ್ಲಿ ಶ್ರೀಮಠದಲ್ಲಿ ಆಯೋಜಿಸಲಾಗಿದೆ.
ಸಮಸ್ತ ಆಸ್ತಿಕರು ಈ ಸ್ತೋತ್ರಗಳನ್ನು ಅಭ್ಯಾಸಮಾಡಿ, ಈ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಶಂಕರ ಭಗವತ್ಪಾದರ ಹಾಗೂ ಉಭಯ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕೆಂದು ಬಯಸುತ್ತೇವೆ.